Media Object Image

ಕರ್ನಾಟಕ ಸರ್ಕಾರದ

ಅಧಿಕೃತ ಜಾಲತಾಣ

ಹಾವೇರಿ ಜಿಲ್ಲೆ

ಹಾವೇರಿ ಜಿಲ್ಲೆ ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿದ್ದು ಉತ್ತರದ ಬೀದರ ಮತ್ತು ದಕ್ಷಿಣದ ಕೊಳ್ಳೆಗಾಲ ಇವುಗಳಿಗೆ ಸಮಾನ ಅಂತರದಲ್ಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲು ಜಿಲ್ಲೆ ಎಂದು ಸಹ ಪ್ರಸಿದ್ಧಿಯಾಗಿದೆ. ಹಾವೇರಿ ಜಿಲ್ಲೆಯು ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ.

ಸಂತ ಶಿಶುನಾಳ ಶರೀಫರು, ಭಕ್ತಶ್ರೇ಼ಷ್ಟ ಕನಕದಾಸರು, ವರಕವಿ ಸರ್ವಜ್ಞ, ಹಾನಗಲ್ ಕುಮಾರ ಶಿವಯೋಗಿಗಳು, ವಾಗೀಶ ಪಂಡಿತಾರಾಧ್ಯರು, ಕಾದಂಬರಿ ಪಿತಾಮಹ ಗಳಗನಾಥರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ:ವಿನಾಯಕ ಕೃಷ್ಣ ಗೋಕಾಕರು ಮುಂತಾದ ಮಹನಿಯರುಗಳಿಗೆ ಜನ್ಮನೀಡಿದ ಹೆಮ್ಮೆಯ ಜಿಲ್ಲೆ ಹಾವೇರಿ. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮ ಮೈಲಾರ ಮಹದೇವಪ್ಪನವರು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನವರು. ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಹಳ್ಳಿಕೇರಿ ಗುದ್ಲೆಪ್ಪನವರು ಹಾವೇರಿ ಜಿಲ್ಲೆಯ ಹೊಸರಿತ್ತಿಯವರು. ಅವರು ಅಲ್ಲಿಯೇ ಗುರುಕುಲ ಮಾದರಿಯಲ್ಲಿ ಗಾಂಧೀ ಗ್ರಾಮೀಣ ಗುರುಕುಲ ಎಂಬ ಹೆಸರಿನ ಶಾಲೆಯನ್ನು ಆರಂಭಿಸಿದ್ದಾರೆ. more