Close

ಸಂಸ್ಥೆ ನಕಾಶೆ

 

ಸಂಸ್ಥೆ ನಕಾಶೆ ಹಾವೇರಿ

ಜಿಲ್ಲಾಧಿಕಾರಿಗಳ ಆಡಳಿತ:
     ಜಿಲ್ಲಾಧಿಕಾರಿಯು ಜಿಲ್ಲಾಡಳಿತದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿಯು ವಿವಿಧ ಶಾಖೆಗಳನ್ನು ಒಳಗೊಂಡಿದ್ದು ಶಾಖೆಗಳ ಕೆಲಸದ ಮೇಲ್ವಿಚಾರಣೆಯನ್ನು ಶಿರಸ್ತೆದಾರರು ವಹಿಸಿಕೊಂಡು, ಅವರು ಮಾರ್ಗದರ್ಶನ ನೀಡಲು ಮತ್ತು ಸಮಗ್ರ ನಿರ್ವಹಣೆಗೆ ಜವಾಬ್ದಾರರು. ಪ್ರತಿ ಶಾಖೆಗೆ ಪ್ರಥಮ ದರ್ಜೆಯ ಸಹಾಯಕರು ಅಥವಾ ದ್ವಿತೀಯ ದರ್ಜೆಯ ಸಹಾಯಕರು ವಿಷಯ ನಿರ್ವಾಹಕರಾಗಿ ವಹಿಸಿದ ಸಂಕಲನಗಳನ್ನು ನಿರ್ವಹಿಸುತ್ತಾರೆ. ಜಿಲ್ಲಾಧಿಕಾರಿಗಳ ಅದೀನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾಗಿ ಉಪ ವಿಭಾಗಕ್ಕೆ ಸಹಾಯಕ ಆಯುಕ್ತರು, ತಾಲ್ಲೂಕುಗಳಿಗೆ ತಹಶೀಲ್ದಾರರು, ಶಿರಸ್ತೆದಾರ್, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಕಾರ್ಯನಿರ್ವಹಿಸುತ್ತಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೋರ್ಟ್ ಪ್ರಕರಣಗಳು ಅಂದರೆ ಪುನರೀಕ್ಷಣಾ ಮೇಲ್ಮನವಿಗಳಿಗೆ ಸಂಭಂಧಪಟ್ಟ, ಕರ್ನಾಟಕ ಭೂಕಂದಾಯ ಕಾಯ್ದೆ 1964, ಭೂಮಂಜೂರಾತಿ ಕಾಯ್ದೆ ಮತ್ತು ನಿಯಮಗಳು 1966, ಭೂಸುಧಾರಣೆ ಕಾಯ್ದೆ 1974, ಪಿಟಿಸಿಎಲ್ ಕಾಯ್ದೆ 1978, ಇನಾಂ ರದ್ದತಿ ಕಾಯ್ದೆ ಅಡಿಯಲ್ಲಿ ಬರುವ ಪ್ರಕರಣಗಳನ್ನು ವ್ಯವಹರಿಸುತ್ತಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಸ್ಥಳ :
     ಜಿಲ್ಲಾಧಿಕಾರಿ ಮತ್ತು ಜಿಲ್ಲಾದಂಡಾಧಿಕಾರಿಗಳ ಕಚೇರಿಯು ಹಾವೇರಿಯಿಂದ(ಬಸ್ ನಿಲ್ದಾಣದಿಂದ) 7 ಕಿ.ಮಿ. ದೂರದಲ್ಲಿ ದೇವಗಿರಿ ಗ್ರಾಮದ ಹತ್ತಿರವಿದೆ.

ವಿವಿಧ ಸೇವೆಗಳಿಗೆ ಹೇಗೆ ಸಂಪರ್ಕಿಸಬೇಕು?
     ಜಿಲ್ಲಾ ಮಟ್ಟದ ಕಚೇರಿಗೆ ಜನರು ವಿವಿಧ ಕುಂದುಕೊರತೆಗಳೊಂದಿಗೆ ಬರುತ್ತಾರೆ. ಅವರಿಗೆ ಎಲ್ಲಿ ಯಾರಿಗೆ ಸಂಪರ್ಕಿಸಬೇಕೆಂದು ಗೊತ್ತಿರುವುದಿಲ್ಲ ಮತ್ತು ಅವನ / ಅವಳ ಕೆಲಸ ಪಡೆದುಕೊಳ್ಳಲು ಎಷ್ಟು ಬಾರಿ ಸಂಪರ್ಕಿಸುವ ಅಗತ್ಯವಿದೆವೆಂಬುದಕ್ಕಾಗಿ ಉಪಯುಕ್ತ ಮಾಹಿತಿಗಾಗಿ ಒಂದು ಭಾಗ ಇಲ್ಲಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಸ್ಪರ ಹೊಂದಾಣಿಕೆಗಾಗಿ ವಿವಿಧ ಶಾಖೆಯ ಅಂಗಗಳು ಈ ಕೆಳಗಿನಂತಿವೆ.

ಸಿಬ್ಬಂದಿ ವಿಭಾಗ :

     ಖಾಲಿ ಹುದ್ದೆಗಳು, ವೇತನ ಮತ್ತು ಭತ್ಯೆ, ವರ್ಗಾವಣೆ ಮತ್ತು ಪ್ರಚಾರಗಳು, ನೇಮಕಾತಿ, ನಿವೃತ್ತಿಗಳು, CCA (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ), ವೈಯಕ್ತಿಕ ಠೇವಣಿ ಖಾತೆಗಳು, ಆಡಿಟ್ ವರದಿಗಳು, ಜಿಲ್ಲಾಧಿಕಾರಿಗಳ ದಿನಚರಿ ಡೈರಿ ಮತ್ತು ಉದ್ಯಮ ಅಂಕಿಅಂಶ ಸಂಬಂಧಿಸಿದ ವಿಷಯಗಳಲ್ಲಿ ವ್ಯವಹರಿಸುತ್ತದೆ.

ಕಂದಾಯ ವಿಭಾಗ :
     ಜಮಾಬಂದಿ, ಸರಕಾರಿ ಬೇಡಿಕೆ, ವಸೂಲಿ ಮತ್ತು ಬಾಕಿ, ಭೂ ಸ್ವಾಧೀನ, ಭೂ ಪರಿವರ್ತನೆ, ಪಿಟಿಸಿಎಲ್, ಮೇಲ್ಮನವಿ, ಭೂಸುಧಾರಣೆ ಮತ್ತು ಖನಿಜಗಳು ಮತ್ತು ಅತಿಕ್ರಮಣಗಳ ವಿಷಯಗಳಲ್ಲಿ ವ್ಯವಹರಿಸುತ್ತದೆ.

ಚುನಾವಣೆ ವಿಭಾಗ :
     ಲೋಕಸಭೆ, ವಿಧಾನಸಭೆ, ವಿಧಾನಪರಿಷತ್, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಇತರ ಸಹಕಾರಿ ಸಂಸ್ಥೆಗಳು ಎಲ್ಲಾ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಸಂಬಂಧಿಸಿದ ಚುನಾವಣಾ ವಿಷಯಗಳಲ್ಲಿ ಈ ವಿಭಾಗವು ವ್ಯವಹರಿಸುತ್ತದೆ.

ಮುಜರಾಯಿ ವಿಭಾಗ :
     ಮುಜರಾಯಿ ದೇವಾಲಯಗಳ ನಿರ್ಮಾಣ ಮತ್ತು ನವೀಕರಣ ಕಾರ್ಯವನ್ನು ಈ ವಿಭಾಗವು ವ್ಯವಹರಿಸುತ್ತದೆ, ಧರ್ಮದರ್ಶಿ ಮತ್ತು ಆರ್ಚಕರುಗಳಿಗೆ ತಸ್ತೀಕ್ ಮತ್ತ ವರ್ಷಾಶನ ಪಾವತಿ, ನೇಮಕ ಆರಾಧನಾ ಯೋಜನೆಗಳ ಬಗ್ಗೆ ಈ ವಿಭಾಗವು ವ್ಯವಹರಿಸುತ್ತದೆ.

ಜನಗಣತಿ ವಿಭಾಗ :
     ಜನಗಣತಿ ವಿಷಯಗಳಲ್ಲಿ ಈ ವಿಭಾಗವು ವ್ಯವಹರಿಸುತ್ತದೆ.

ದಂಡನಾ ವಿಭಾಗ :
     ಕಾನೂನ ಮತ್ತು ಸುವ್ಯವಸ್ಥೆ ವಿಷಯಗಳಲ್ಲಿ ಈ ವಿಭಾಗವು ವ್ಯವಹರಿಸುತ್ತದೆ (ಸಿ.ಆರ್.ಪಿ.ಸಿ. ಕಲಂ 144 ಇತ್ಯಾದಿ), ಆರ್ಮ್ಸ್ ಮತ್ತು Ammunitions & ಚಿತ್ರಮಂದಿರಗಳ ಅನುಮತಿ ಬಗ್ಗೆ ಸಂಬಂಧಿಸಿದ ವಿಷಯಗಳನ್ನು ವ್ಯವಹರಿಸುತ್ತದೆ.

ಇತರೆ ವಿಭಾಗ :
     ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಕ್ಷೇತ್ರಾಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಇತರ ಯೋಜನೆಗಳನ್ನು ಈ ವಿಭಾಗವು ವ್ಯವಹರಿಸುತ್ತದೆ. ಇದು ಲೋಕೋಪಯೋಗಿ ಇಲಾಖೆಯ ಕಟ್ಟಡಗಳು, ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು, ಮನೆ ಬಾಡಿಗೆ ನಿಯಂತ್ರಣ ಮತ್ತು ಕಂದಾಯ ಇಲಾಖೆಯ ಇತರ ವಿಷಯಗಳು ಕುರಿತು ವ್ಯವಹರಿಸುತ್ತದೆ.